¡Sorpréndeme!

ಚೆಂದುಳ್ಳಿ ಚೆಲುವೆ ಶುಭಾ ಪೂಂಜಾ ಜೊತೆ ರಾಪಿಡ್ ಫೈರ್ ರೌಂಡ್ | Oneindia Kannada

2018-02-15 120 Dailymotion

V.Nagendra Prasad directorial, Shubha Poonja starrer Kannada Movie 'Google' to release on February 16th. When Shubha Poonja came to speak about Googal movie, she participated in Rapid Fire Round. To know what she answers, watch this video.


ಇದು 'ಗೂಗಲ್'... ಕನ್ನಡ ಸಿನಿಮಾ. ಗೂಗಲ್ ಹೇಗೆ ಬಹುತೇಕರ ಇಂಟರ್ ನೆಟ್ ಬ್ರೌಸರ್ ಆಗಿದ್ಯೋ, ಹಾಗೇ ಈ ಸಿನಿಮಾ ಕುಟುಂಬದ ಆಗು-ಹೋಗುಗಳ ಕಥಾಹಂದರ. ಸಿನಿಮಾದ ನಿರ್ದೇಶಕ ಹಾಗೂ ನಾಯಕ ನಟ ವಿ.ನಾಗೇಂದ್ರ ಪ್ರಸಾದ್ ಹೇಳುವಂತೆ, ಗೂಗುಲ್, ಕೌಟುಂಬಿಕ ಕಥಾ ಹಂದರದ ಸಿನಿಮಾ. ನಮ್ಮ ಸುತ್ತಲಿನ ದೈನಂದಿನ ಸನ್ನಿವೇಶಗಳೇ 'ಗೂಗಲ್' ಸಿನಿಮಾದ ಕಥಾವಸ್ತು. 'ಗೂಗಲ್' ಸಿನಿಮಾ ಫೆ.16ರಂದು ರಾಜ್ಯಾದ್ಯಂತ 80 ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ''ಕನ್ನಡ ಚಿತ್ರೋದ್ಯಮದಲ್ಲಿ ಕಳೆದ ಎರಡು ದಶಕಗಳಿಂದ ದುಡಿಯುತ್ತಿದ್ದೇನೆ. ನೂರಾರು ಚಿತ್ರಗಳಿಗೆ ಸಾವಿರಾರು ಹಾಡುಗಳನ್ನು ರಚಿಸಿದ್ದೇನೆ. ಐದು ಚಿತ್ರಗಳಿಗೆ ನಿರ್ದೇಶನವನ್ನು ಸಹ ಮಾಡಿದ್ದು, ಇದೇ ಮೊದಲ ಬಾರಿಗೆ ಚಿತ್ರದ ನಿರ್ದೇಶನದ ಜೊತೆಗೆ ನಾಯಕ ನಟನಾಗಿ ಅಭಿನಯಿಸಿದ್ದೇನೆ'' ಎನ್ನುತ್ತಾರೆ ವಿ.ನಾಗೇಂದ್ರ ಪ್ರಸಾದ್. ಇನ್ನು ಸಿನಿಮಾ ಬಗ್ಗೆ ಮಾತನಾಡಲು ಶುಭಾ ಪೂಂಜಾ ಬಂದಾಗ ರಾಪಿಡ್ ಫೈರ್ ರೌಂಡ್ ನಲ್ಲಿ ಭಾಗವಹಿಸಿ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ. ಈ ವಿಡಿಯೋ ನೋಡಿ